ಗುವಾಹಟಿ, ಜೂ16(DaijiworldNews/DB): ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೆ ಭೂಕುಸಿತದಿಂದಾಗಿ ಮನೆಗಳಿಗೂ ಹಾನಿ ಉಂಟಾಗಿದೆ.
ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅಲ್ಲಲ್ಲು ಭೂಕುಸಿತ ಉಂಟಾಗಿದೆ. ಕಾಮಾಕ್ಯದ ಮನೆಯೊಂದಕ್ಕೆ ಭೂಕುಸಿತದಿಂದ ತೀವ್ರ ಹಾನಿಯಾಗಿದೆ. ಈವರೆಗೆ ಭೂಕುಸಿತದಿಂದಾಗಿ 42 ಮಂದಿ ಸಾವನ್ನಪ್ಪಿದ್ದು, ಮೃತ ದೇಹಗಳು ಭೂಕುಸಿತದಿಂದ ಉಂಟಾದ ಅವಶೇಷಗಳಡಿ ಸಿಲುಕಿವೆ ಎಂದು ವರದಿಯಾಗಿದೆ. ಕರೀಂಗಂಜ್ ಅಗ್ನಿಶಾಮಕ ಸೇವಾ ಕೇಂದ್ರದ ಬಳಿ ಅಟೋರಿಕ್ಷಾದ ಮೇಲೆ ಮರಬಿದ್ದು ಚಾಲಕ ಅಸು ನೀಗಿದ್ದಾನೆ.
ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿ ನೀರಿನ ಮಟ್ಟ ಏರಿಕೆಯಾಗಿದೆ. ದ್ವಾರಕುಚಿ, ಬೋಡೋಲ್ಯಾಂಡ್ ಚೌಕ್, ಕೆಕೇರಿಕುಚ್ಚಿ ಗ್ರಾಮಗಳು, ಕೃಷಿ ಭೂಮಿಗಳು ಜಲಾವೃತಗೊಂಡಿವೆ.