ಉತ್ತರ ಪ್ರದೇಶ, ಜೂ 14 (DaijiworldNews/HR): ಉತ್ತರ ಪ್ರದೇಶದ ಮೈನ್ಪುರಿ ಮತ್ತು ಫರೂಕಾಬಾದ್ ಜಿಲ್ಲೆಗಳ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ಎದೆಯ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಚ್ಚೆಯನ್ನು ಹಾಕಿಸಿಕೊಂಡು ಅಭಿಮಾನ ಮೆರೆದಿರುವ ಘಟನೆ ನಡೆದಿದೆ.
ಈ ರೀತಿ ಅಭಿಮಾನ ಮೆರೆದ ಯುವಕನನ್ನು ಯಮೀನ್ ಸಿದ್ಧಿಕಿ(23) ಎಂದು ಗುರುತಿಸಲಾಗಿದೆ.
ಯೋಗಿ ಆದಿತ್ಯನಾಥ್ ಜನ್ಮ ದಿನದ ಪ್ರಯುಕ್ತ ಹಚ್ಚೆ ಹಾಕಿಸಿಕೊಂಡಿದ್ದು, ಯೋಗಿ ನನ್ನ ಮಾದರಿ ವ್ಯಕ್ತಿ ಎಂದು ಹೇಳಿದ್ದಾನೆ.
ಇನ್ನು ಆತ ಮಾಡಿರುವ ಈ ಕೆಸಕ್ಕೆ ಸಂಬಂಧಿಕರು - ಸ್ನೇಹಿತರು ಟೀಕಿಸುತ್ತಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ.