ನವದೆಹಲಿ, ಜೂ 14 (DaijiworldNews/HR): ಇಸ್ಲಾಂ ಧರ್ಮದ ಪ್ರಕಾರ ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಕ್ಷಮಿಸಬೇಕು ಎಂದು ಜಮಾತ್ ಉಲೇಮಾ ಎ ಹಿಂದ್ ನ ಅಧ್ಯಕ್ಷ ಸುಹೈಬ್ ಖ್ವಾಸ್ಮಿ ಹೇಳಿರುವುದಾಗಿ ವರದಿಯಾಗಿದೆ.
ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ನೂಪುರ್ ಶರ್ಮಾ ಅವರು ಹೇಳಿರುವ ಹೇಳಿಕೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದನ್ನು ಮುಸ್ಲಿಂ ವಿದ್ವಾಂಸರ ಸಂಘಟನೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.
ಇನ್ನು ಇಸ್ಲಾಂ ಧರ್ಮ ಹೇಳುವ ಪ್ರಕಾರ ನೂಪುರ್ ಶರ್ಮಾಳನ್ನು ಕ್ಷಮಿಸಬೇಕಾಗಿದ್ದು, ಅವರ ಹೇಳಿಕೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಎಂದಿದ್ದಾರೆ.