ಭರೂಚ್, ಜೂ 14 (DaijiworldNews/MS): ಹತ್ತನೇ ತರಗತಿಯಲ್ಲಿ ಜಸ್ಟ್ ಪಾಸ್ ಆದ ತಮ್ಮ ಅಂಕಪಟ್ಟಿಯನ್ನು ಟ್ವಿಟರ್ ನಲ್ಲಿ ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಛತ್ತೀಸ್ಗಢ ಕೇಡರ್ನ 2009 ರ ಬ್ಯಾಚ್ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ರಿಪೋರ್ಟ್ ಕಾರ್ಡ್ ಜೊತೆಗೆ ಐಎಎಸ್ ಅಧಿಕಾರಿ ತುಷಾರ್ ಸುಮೇರ್ ಅವರ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
10ನೇ ತರಗತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ 35 ಮತ್ತು ಗಣಿತದಲ್ಲಿ ಕೇವಲ 36 ಅಂಕ ಪಡೆದಿರುವ ಐಎಎಸ್ ಅಧಿಕಾರಿ ತುಷಾರ್ ಸುಮೇರ್ 2012ನೇ ಬ್ಯಾಚ್ ನವರಾಗಿದ್ದಾರೆ. ಇವರು ಗುಜರಾತ್ನ ಭರೂಚ್ನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮೇರಾ ಅವರು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಮಾತ್ರ ಕಡಿಮೆ ಅಂಕ ಪಡೆದು ತೇರ್ಗಡೆ ಹೊಂದಿದ್ದರು. ಅವರು ಆರ್ಟ್ಸ್ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅದಕ್ಕೂ ಮುನ್ನ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದ್ದರು.