ಬೆಂಗಳೂರು, ಜೂ 14 (DaijiworldNews/HR): ಮಾದಕ ವಸ್ತು ಸೇವನೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಹಾಗೂ ಬಂಧಿತರಾಗಿದ್ದ ಇತರ ನಾಲ್ವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಪೂರ್ವ ಉಪ ಪೊಲೀಸ್ ಆಯುಕ್ತ ಭೀಮಾ ಶಂಕರ್ ಗುಳೇದ್, ಸಿದ್ದಾಂತ್ ಕಪೂರ್ ಹಾಗೂ ಬಂಧಿತರಾಗಿದ್ದ ಇತರ ನಾಲ್ವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಸಿದ್ದಾಂತ್ ಕಪೂರ್ ಮತ್ತು ಇತರ ಆರೋಪಿಗಳು ಕರೆ ಮಾಡಿದಾಗ ಪೊಲೀಸರ ಮುಂದೆ ಹಾಜರಾಗಬೇಕಾಗುತ್ತದೆ ಎಂದಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಸಿದ್ದಾಂತ್ ಕಪೂರ್, ಸ್ನೇಹಿತರಾದ ಮೈಂಡ್ ಫೈರ್ ಸಲ್ಯೂಷನ್ ಬ್ಯುಸಿನೆಸ್ ಮ್ಯಾನೆಜರ್ ಅಕಿಲ್ ಸೋನಿ, ಲಾಜಿಸ್ಟಿಕ್ ಸ್ಟಾರ್ಟ್ಅಪ್ ಕಂಪನಿಯ ಆಪರೇಷನ್ ಹೆಡ್ ಹಜರತ್ ಸಿಂಗ್, ರಫೀಕ್ಯೂ ಡಿಜಿಟಲ್ ಮಾರ್ಕೆಟಿಂಗ್ನ ಹನಿ, ಫ್ರೀಲ್ಯಾನ್ಸ್ ಫೋಟೋಗ್ರಾಫರ್ ಅಕಿಲ್ ರನ್ನು ಬಂಧಿಸಲಾಗಿತ್ತು.