ಶ್ರೀನಗರ, ಜೂ 13 (DaijiworldNews/HR): 2022ರ ಆರಂಭದಿಂದ 6 ತಿಂಗಳಲ್ಲಿ ಬರೋಬ್ಬರಿ 100 ಮಂದಿ ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಈ ವರ್ಷದ ಆರಂಭದಿಂದ ಪಾಕ್ನ 29 ಉಗ್ರರು ಸೇರಿದಂತೆ 100 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ಇನ್ನು ಇವರಲ್ಲಿ 63 ಮಂದಿ ಲಷ್ಕರ್-ಎ-ತೊಯ್ಬಾಗೆ ಸೇರಿವರಾಗಿದ್ದು, ಇತರ 24 ಮಂದಿ ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ (ಜೆಇಎಂ) ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.