ಆಂಧ್ರಪ್ರದೇಶ, ಜೂ 13 (DaijiworldNews/HR): ಆಂಧ್ರಪ್ರದೇಶದ ಚಿಂತೂರು ವಲಯದ ಎಡುಗುರಳ್ಳಪಲ್ಲಿಯಲ್ಲಿ ಖಾಸಗಿ ಟ್ರಾವೆಲ್ಸ್ ಬಸ್ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿ, 40ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಧನೇಶ್ವರ ದಳಪತಿ (24), ಜೀತು ಹರಿಜನ್ (5) ಮತ್ತು ಸುನೇನಾ ಹರಿಜನ್ (2) ಎಂದು ಗುರುತಿಸಲಾಗಿದೆ.
ವಿಷಯ ತಿಳಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಘಟನೆಯಲ್ಲಿ ಗಾಯಗೊಂಡವರನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಈ ಬಸ್ ಒಡಿಶಾದ ಭವಾನಿಪಟ್ಟಣದಿಂದ ವಿಜಯವಾಡಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.