ಹೈದರಾಬಾದ್, ಜೂ 12 (DaijiworldNews/HR): ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂನಲ್ಲಿ ಆನ್ಲೈನ್ ಗೇಮ್ ಪಬ್ಜಿಯಲ್ಲಿ ಸೋತು, ಸ್ನೇಹಿತರಿಂದ ಅಪಹಾಸ್ಯಕ್ಕೀಡಾದ 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಬಾಲಕ ಕಾಂಗ್ರೆಸ್ನ ಸ್ಥಳೀಯ ಮುಖಂಡ ಶಾಂತಿರಾಜ್ ಎಂಬುವವರ ಅವರ ಪುತ್ರನಾಗಿದ್ದು, ಪಬ್ಜಿ ಆಡುವ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ.
ಇನ್ನು ಆತ ಭಾನುವಾರ ತನ್ನ ಸ್ನೇಹಿತರೊಂದಿಗೆ ಪಬ್ಜಿ ಆಟವಾಡುತ್ತಿದ್ದು, ಅದರಲ್ಲಿ ಸೋತಿದ್ದ. ಆಗ ಸ್ನೇಹಿತರೆಲ್ಲರೂ ಗೇಲಿ ಮಾಡಿದ್ದಾರೆ, ಅಪಮಾನಿತನಾದ ಬಾಲಕ ಮನೆಗೆ ಬಂದು ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.