ಜಾಂಜ್ ಗಿರ್, ಜೂ 12 (DaijiworldNews/HR): ಬೋರ್ವೆಲ್ನಲ್ಲಿ 11 ವರ್ಷದ ಬಾಲಕ ಬಿದ್ದದ್ದು, ಆತನನ್ನು ರಕ್ಷಿಸಲು ಕಳೆದ 42 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಘಟನೆ ಛತ್ತೀಸ್ ಗಢದ ಜಾಂಜ್ ಗಿರ್ ಚಂಪಾ ಜಿಲ್ಲೆಯಲ್ಲಿ ನಡೆದಿದೆ.
ಬಾಲಕ ರಾಹುಲ್ ಆರೋಗ್ಯದ ಬಗ್ಗೆ ಕಲೆಕ್ಟರ್ ಮೇಲ್ವಿಚಾರಣೆ ನಡೆಸುತ್ತಿದ್ದು, ವೈದ್ಯಕೀಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಲಾಗುತ್ತಿದೆ.
ಇನ್ನು ರಾಹುಲ್ ನನ್ನು ಸುರಕ್ಷಿತವಾಗಿ ಹೊರತರಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ನೂರಾರು ಅಧಿಕಾರಿಗಳು, ನೌಕರರ ತಂಡ ಬೋರ್ ವೆಲ್ ವರೆಗೆ ಸುರಂಗ ಮಾರ್ಗ ನಿರ್ಮಿಸುವ ಕೆಲಸ ಮಾಡುತ್ತಿದೆ.
ಬಾಲಕನ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಭಾರತೀಯ ಸೇನೆಯ ತಜ್ಞರ ಸಹಾಯ ಪಡೆಯಲಾಗುತ್ತಿದೆ.