ಜೂ 12 (DaijiworldNews/HR): 16 ವರ್ಷದ ಬಾಲಕಿಯನ್ನು ಹೋಟೆಲ್ ಗೆ ಕರೆದುಕೊಂಡು ಹೋದ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರವೆಗಿ ಕೃತ್ಯವನ್ನು ತಮ್ಮ ಇನ್ನೊಬ್ಬ ಸ್ನೇಹಿತನಿಗೆ ಲೈವ್ ಸ್ಟ್ರೀಮ್ ಮಾಡಿ ತೋರಿಸಿದ್ದು, ಬಳಿಕ ತಮ್ಮ ಈ ಕೃತ್ಯದ ವಿಡಿಯೋ ಹಾಗೂ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ನಡೆದಿದೆ.
ಘಟನೆಯ ಕುರಿತು ಬಾಲಕಿ ಶುಕ್ರವಾರದಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಆರೋಪಿಗಳು ಹಿಂದೆಯೂ ಇಂತಹುದೇ ಕೃತ್ಯವೆಸಗಿದ್ದರೆಂದು ತನಿಖೆ ವೇಳೆ ತಿಳಿದುಬಂದಿದೆ.
ಇನ್ನು ಬಾಲಕಿ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಜೊತೆಗೆ ಪೋಕ್ಸೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯೂ ಕೇಸ್ ದಾಖಲಿಸಿಕೊಂಡಿದ್ದಾರೆ.