ಕಲಬುರಗಿ, ಜೂ 12 (DaijiworldNews/HR): ಚಡ್ಡಿ ಎನ್ನುವು ಕೇವಲ ಒಂದು ಸಂಘ, ಸಂಸ್ಥೆ ಅಷ್ಟೇ ಅಲ್ಲ, ಅದು ಮಾನ ಕಾಪಾಡುವ ವಸ್ತ್ರವೂ ಹೌದು ಎನ್ನುವುದು ಮರೆಯಬಾರದು ಎಂದು ಕಾಂಗ್ರೆಸ್ ವಿರುದ್ದ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಚಡ್ಡಿ ಎನ್ನುವು ಕೇವಲ ಒಂದು ಸಂಘ, ಸಂಸ್ಥೆ ಅಷ್ಟೇ ಅಲ್ಲ, ಅದು ಮಾನ ಕಾಪಾಡುವ ವಸ್ತ್ರವೂ ಹೌದು ಎನ್ನುವುದು ಮರೆಯಬಾರದು. ಅಂಬೇಡ್ಕರ್ ಸ್ಥಾಪಿಸಿದ್ದ ಸಮತಾದಳದ್ದು ಸಹ ಚಡ್ಡಿಯೇ ಇತ್ತಲ್ಲ. ನೆಹರೂ, ಜಾಫರ್ ಶರೀಫ್ ಚಡ್ಡಿ ಹಾಕಿರಲಿಲ್ಲವೇ? ಆವಾಗ ನಿಮಗೆ ತೊಂದರೆ ಅನ್ನಿಸಲಿಲ್ಲ. ಈಗ ಆರ್ ಎಸ್ ಎಸ್ ಚಡ್ಡಿ ಬಳಸುತ್ತಿದ್ದರೆ ನಿಮಗೇನು ತೊಂದರೆ? ಎಂದು ಪ್ರಶ್ನಿಸಿದ್ದಾರೆ.
ನಾನೇನು ಚಡ್ಡಿಯನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಪೋಟೋಗ್ರಾಫರ್ ಕೇಳಿದರೂ ಎನ್ನುವ ಕಾರಣಕ್ಕೆ ನಾನು ಚಡ್ಡಿ ಮೇಲಕ್ಕೆ ಎತ್ತಿದ್ದೆ ಎಂದು ನಾರಾಯಣಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಪ್ರಿಯಾಂಕ್ ಅವರೇ ನಿಮ್ಮ ಮಂತ್ರಿಗಿರಿಯ ಆಸೆಗಾಗಿ ಈ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿಕೊಂಡಂತಾಗಿದೆ ಎಂದಿದ್ದಾರೆ.