ಜಾಲ್ವಾರ್ (ರಾಜಸ್ತಾನ), ಜೂ 12 (DaijiworldNews/DB): ಕಾರು ಮತ್ತು ಬೈಕ್ಗೆ ಕಂಟೈನರ್ ಟ್ರಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜಾಲ್ವಾರ್ ಜಿಲ್ಲೆಯ ಆಕೊಡಿಯ ಗ್ರಾಮದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನಡೆದಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಹಾಗೂ ಬೈಕಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರಗೆ ದಾಖಲಿಸಲಾಗಿದೆ. ಬೈಕಿನಲ್ಲಿದ್ದ ಮೂವರು ವಿದ್ಯಾರ್ಥಿಗಳಾಗಿದ್ದು, ಕಾಲೇಜಿನಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಮಧ್ಯಪ್ರದೇಶದವರಾಗಿದ್ದು, ಜಾಲ್ವಾರ್ನ ಬಾಲಾಜಿ ಮಂದಿರಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು.
ಢಿಕ್ಕಿಯ ರಭಸಕ್ಕೆ ಕಾರನ್ನು ಸುಮಾರು 50 ಮೀಟರ್ ದೂರದವರೆಗೆ ಟ್ರಕ್ ಎಳೆದೊಯ್ದಿದೆ. ಈ ವೇಳೆ ಬೈಕ್ಗೂ ಟ್ರಕ್ ಢಿಕ್ಕಿಯಾಗಿದೆ. ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಾಯಗೊಂಡ ಇಬ್ಬರ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.