ಒಡಿಶಾ, ಜೂ 12 (DaijiworldNews/HR): ತೈಲ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಸಜೀವ ದಹನಗೊಂಡಿರುವ ಘಟನೆ ಒಡಿಶಾದ ನಯಾಗರ್ ಪ್ರದೇಶದಲ್ಲಿ ನಡೆದಿದೆ.
ಇಂದು ಮುಂಜಾನೆ ಎರಡು ಟ್ರಕ್ಗಳು ಡೀಸೆಲ್ ಮತ್ತು ಪೆಟ್ರೋಲ್ ತುಂಬಿಕೊಂಡು ಪರದೀಪ್ನಿಂದ ನಯಾಗಢಕ್ಕೆ ತೆರಳುತ್ತಿದ್ದಾಗ ಕುಸುಮಿ ನದಿಯಲ್ಲಿ ಒಂದು ಟ್ರಕ್ ಮಗುಚಿ ಬಿದ್ದಿದ್ದು, ನಾಲ್ವರು ಸಾವನ್ನಪ್ಪಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್ಪಿ ಅಲೇಖಾ ಚಂದ್ರ ಪಾಹಿ ತಿಳಿಸಿದ್ದಾರೆ.
ಇನ್ನು ಎರಡನೇ ಟ್ಯಾಂಕರ್ನ ಸಿಬ್ಬಂದಿ ಮೊದಲ ಟ್ಯಾಂಕರ್ನ ಸಿಬ್ಬಂದಿಯನ್ನು ರಕ್ಷಿಸಲು ತೆರಳಿದ್ದು, ಆ ವೇಳೆ ಹಠಾತ್ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಸಜೀವ ದಹನಗೊಂಡಿದ್ದಾರೆ.