ತಮಿಳುನಾಡು, ಜೂ 12 (DaijiworldNews/HR): ಮಿಳುನಾಡಿನ ಮಧುರೈ ಪಾಲಂಗಂಟಂನಲ್ಲಿ ಯುವಕನೊಬ್ಬ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದುಬಿದ್ದಿ ಬಳಿಕ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ಶ್ರೀ ವಿಷ್ಣು (27) ಎಂದು ಗುರುತಿಸಲಾಗಿದೆ.
ಯುವಕ ಕೆಲಸ ಮುಗಿಸಿ ರಾತ್ರಿ 9 ಗಂಟೆ ಸುಮಾರಿಗೆ ಜಿಮ್ ಗೆ ತೆರಳಿದ್ದ ಎನ್ನಲಾಗಿದ್ದು, ವರ್ಕೌಟ್ ಮಾಡಿದ ಸ್ವಲ್ಪ ಸಮಯದ ಬಳಿಕ ಆತ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ಆತನ ತಂದೆ ಕಮಲೇಶ್ವರ್ ತಿಳಿಸಿದ್ದಾರೆ.