ಜೈಪುರ್, ಜೂ 11 (DaijiworldNews/DB): ಅರ್ಚಕರನ್ನು ಕೊಲೆ ಮಾಡಿ ದೇವರ ವಿಗ್ರಹ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬುಂಡಿ ಜಿಲ್ಲೆಯ ನಿವಾಸಿಗಳಾದ ಸೋನು ಮೆಹವರ್, ಬಾದಲ್ ಮೆಗ್ವಾಲ್ ಮತ್ತು ಲೋಕೇಶ್ ಶ್ರಿಂಗಿ ಎಂದು ಗುರುತಿಸಲಾಗಿದೆ. ಬುಂಡಿಯ ಡೋಬ್ರಾ ದೇವಸ್ಥಾನದ ಅರ್ಚಕ ವಿವೇಕಾನಂದ ಶರ್ಮಾ (40ವರ್ಷ) ಅವರನ್ನು ಸೋಮವಾರ ಹತ್ಯೆ ಮಾಡಿ ಭಗವಾನ್ ಶ್ರೀಕೃಷ್ಣನ ಅವತಾರವಾದ ಚಾರ್ಭುಜಾ ವಿಗ್ರಹವನ್ನು ಆರೋಪಿಗಳು ಕಳವು ಮಾಡಿದ್ದರು. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಎಎಸ್ಪಿ ಕಿಶೋರಿ ಲಾಲ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಇದೀಗ ಸ್ವೈಮಾಧೋಪುರ್ನಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಿಗ್ರಹವು ಪುರಾತನ ಕಲಾಕೃತಿಯಾಗಿದ್ದು, 300 ಕೋಟಿ ರೂ. ಬೆಲೆ ಬಾಳುವಂತದ್ದಾಇದೆ ಎಂದು ತಪ್ಪು ಲೆಕ್ಕಾಚಾರ ಹಾಕಿ ಆರೋಪಿಗಳು ಈ ಕೃತ್ಯ ಎಸಗಿದ್ದರು. ನಿರುದ್ಯೋಗಿಗಳಾಗಿದ್ದ ಆರೋಪಿಗಳು ದಿಢೀರ್ ಶ್ರೀಮಂತರಾಗುವ ಆಸೆಯಿಂದ ಈ ರೀತಿ ಮಾಡಿಕೊಂಡಿದ್ದಾಗಿ ಪೊಲೀಸರೆದುರು ಬಾಯ್ಬಿಟ್ಟಿದ್ದಾರೆ.