ಬೆಂಗಳೂರು, ಜೂ 11 (DaijiworldNews/HR): ಬಾಂಗ್ಲಾದಿಂದ ನಗರಕ್ಕೆ ಬರುವವರಿಗೆಗೆ ನಕಲಿ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಗಳನ್ನು ಮಾಡಿಕೊಡುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ್ದಾರೆ.
ಮಾಧನಾಯಕಹಳ್ಳಿ ಪೊಲೀಸರು 9 ಜನರ ಗ್ಯಾಂಗ್ ಅನ್ನು ಬಂಧಿಸಿದ್ದು, ಈ ಗ್ಯಾಂಗ್ ಗಳಿಂದ 13 ಬ್ಯಾಂಕ್ ಅಕೌಂಟ್ ಸೀಜ್ ಮಾಡಲಾಗಿದೆ.
ಇನ್ನು ಈ ಗ್ಯಾಂಗ್ ಗೆಜೆಟ್ ಸೀಲ್ ತಯಾರಿಸುತ್ತಿದ್ದು, 123 ನಕಲಿ ಆಧಾರ್, ಪ್ಯಾನ್ ಕಾರ್ಡ್ ನಕಲಿ ವೋಟರ್ ಐಡಿ ಪತ್ತೆಯಾಗಿದೆ.
ಬಿಬಿಎಂಪಿ ಡಾಕ್ಟರ್ ಹೆಸರಿನಲ್ಲಿ ಗೆಜೆಟ್ ತಯಾರಿಸಿಕೊಂಡಿದ್ದು, ನೂರಾರು ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ.