ಬೆಳಗಾವಿ, ಜೂ 11 (DaijiworldNews/MS): ಭಾರತೀಯ ಜನತಾ ಪಾರ್ಟಿ ಎ ಟೀಂ ಎನ್ನುವುದು ಖಾತ್ರಿಯಾಗಿದೆ. ಬಿ ಟೀಂ ಯಾವುದಾದರೇನು?ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಮಧ್ಯೆ ನಾನು ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿಯು ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಪ್ರತಿಷ್ಠೆ, ಜಿದ್ದಿನಿಂದಾಗಿ ಮೂರು ಸ್ಥಾನವನ್ನು ಗೆದ್ದಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ. ಹೀಗಾಗಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಆರೋಪ ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವ್ಯಾಖ್ಯಾನ ಬಗ್ಗೆ ನಾನು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ, ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಬಿ ಟೀಂ ಎನ್ನುತ್ತಿದೆ. ಹೀಗಾಗಿ ಎ ಟೀಂ ಎನ್ನುವುದು ಬಿಜೆಪಿ ಸ್ಪಷ್ಟವಾಗಿದೆ ಎಂದರು.