ಕಲಬುರ್ಗಿ, ಜೂ 11 (DaijiworldNews/DB): 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ 8 ಮಂದಿಯ ಜಾಮೀನು ಅರ್ಜಿಯನ್ನು ಕಲಬುರ್ಗಿ 1ನೇ ಹೆಚ್ಚುವರಿ ಸೆಷನ್ ನ್ಯಾಯಾಲಯ ತಿರಸ್ಕರಿಸಿದೆ.
ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಆಕೆಯ ಪತಿ, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ ಸೇರಿದಂತೆ ಹಲವು ಮಂದಿ ಆರೋಪಿಗಳನ್ನು ಬಂಧಿಸಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೀಗ ದಿವ್ಯಾ, ಮಹಾಂತೇಶ್ ಸೇರಿ ಎಂಟು ಮಂದಿ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಸದ್ಯ ಜಾಮೀನು ಮುಖಾಂತರ ಹೊರ ಬರುವ ದಿವ್ಯಾ ಮತ್ತಿತರರ ಯೋಜನೆಗೆ ತಡೆ ಬಿದ್ದಂತಾಗಿದೆ.
ನಿನ್ನೆ ಪ್ರಕರಣದ ಕಿಂಗ್ ಪಿನ್ ರುದ್ರೇಗೌಡ ಪಾಟೀಲ್ ಆಪ್ತರಾಗಿರುವ ಅಸ್ಲಂ ಮುಜಾವರ್ ಹಾಗೂ ಮುನಾಫ್ ಜಮಾದಾರ್ ಅವರ ಬಂಧನವಾಗಿದೆ.