ಬೀದರ್, ಜೂ 10 (DaijiworldNews/HR): ರೌಡಿ ಶೀಟರ್ಗೆ ನೋಟಿಸ್ ನೀಡಲು ಹೋದ ಮಹಿಳಾ ಪಿಎಸ್ಐ ಮೇಲೆ ಹಲ್ಲೆ ನಡೆಸಿರುವ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ತೋರಣ ಗ್ರಾಮದಲ್ಲಿ ನಡೆದಿದೆ.
ರೌಡಿಶೀಟರ್ಗೆ ನೊಟೀಸ್ ನೀಡಲು ತೆರಳಿದ್ದ ವೇಳೆ ಕಮಲನಗರದ ಪಿಎಸ್ಐ ನಂದಿನಿ ಸೇರಿದಂತೆ ಮೂವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಇನ್ನು ರೌಡಿಶೀಟರ್ ಜತೆಗೆ ಆತನ ಸಹಚರರು ಸೇರಿ ಒಟ್ಟು ಆರು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ದೊಣ್ಣೆ ಮಾತ್ರವಲ್ಲದೇ ಖಾರದಪುಡಿಯನ್ನೂ ಎರಚಿ ಪೊಲೀಸರಿಗೆ ಥಳಿಸಲು ಯತ್ನಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.