ಕೋಲಾರ, ಜೂ 10 (DaijiworldNews/MS): ರಾಜ್ಯಸಭೆ ಚುನಾವಣೆಯಲ್ಲಿ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಪರ ತಮ್ಮ ಹಕ್ಕು ಚಲಾಯಿಸಿ ಅಡ್ಡ ಮತದಾನ ಮಾಡಿದ ಹಿನ್ನೆಲೆ ಅವರ ರಾಜೀನಾಮೆಗೆ ಒತ್ತಾಯಿಸಿ ಮನೆಗೆ ಮುತ್ತಿಗೆ ಹಾಕುವಂತೆ ಜೆಡಿಎಸ್ ಮುಖಂಡ ಸಿಎಂಆರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಅಡ್ಡ ಮತದಾನವನ್ನ ಕಾಂಗ್ರೆಸ್ ಪರ ಕೋಲಾರದ ಮತ ಚಲಾವಣೆ ಮಾಡಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದುಜೆಡಿಎಸ್ ಕಾರ್ಯಕರ್ತರ ಬೆಂಬಲದಿಂದ ಚುನಾವಣೆಯಲ್ಲಿ ಗೆದ್ದಿರುವ ಶ್ರೀನಿವಾಸ ಗೌಡ ಅವ್ರಿಗೆ ಮಾನ ಮರ್ಯಾದೆ ಇದ್ದರೆ, ರಾಜೀನಾಮೆ ಕೊಟ್ಟು ರಾಜಕಾರಣ ಮಾಡಲಿ. ಇಂಥವರಿಗೆ ಪಕ್ಷದಿಂದ ಶಿಸ್ತು ಕ್ರಮ ಅಗತ್ಯವಿಲ್ಲ. ಈ ರೀತಿಯಾಗಿ ಮಾಡಿ ಜನರ ಮುಂದೆ ಹೇಗೆ ಹೋಗ್ತಾರೆ. ಇಂತಹವರು ಪ್ರಜಾಪ್ರಭುತ್ವ ಉಳಿಸುತ್ತಾರಾ? ಕಾಂಗ್ರೆಸ್ನವರಿಗೆ ಶ್ರೀನಿವಾಸಗೌಡರ ಮತದಿಂದ ಏನ್ಸಿಕ್ತು. ಬಿಜೆಪಿಗೆ ಇವರಿಗೆ ಏನು ವ್ಯತ್ಯಾಸ ಇದೆ?' ಎಂದು ಹೇಳಿದ್ದಾರೆ.
ಶ್ರೀನಿವಾಸ್ ಗೌಡ, ನಾನು ಕಾಂಗ್ರೆಸ್ಗೆ ವೋಟ್ ಹಾಕಿದ್ದೇನೆ. ಅದಕ್ಕೆ ಕಾರಣ ಐ ಲವ್ ಕಾಂಗ್ರೆಸ್ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಹೆಚ್ಡಿಕೆ ಸಿಟ್ಟಾದರೆ ಸಿಟ್ಟಾಗಲಿ ಬಿಡಿ. ರಾಜಕೀಯದಲ್ಲಿ ಅದೆಲ್ಲ ಕಾಮನ್. ನಾನು ಕಾಂಗ್ರೆಸ್ನಿಂದಲೇ ಸಚಿವನಾಗಿದ್ದವನು ಎಂದಿದ್ದಾರೆ.