ಕೋಲ್ಕತ್ತಾ, ಜೂ 10 (DaijiworldNews/MS): ಕೋಲ್ಕತ್ತಾದ ಬಾಂಗ್ಲಾದೇಶ ಹೈಕಮಿಷನ್ನ ಹೊರಗೆ ಇಂದು ಮಧ್ಯಾಹ್ನ ಕೋಲ್ಕತ್ತಾ ಪೊಲೀಸ್ ಸಶಸ್ತ್ರ ಪಡೆಯ ಪೇದೆಯೊಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಗುಂಡಿಕ್ಕಿ ಕೊಂದಿರುವ ಭೀಕರ ಘಟನೆ ನಡೆದಿದೆ.
ಆರೋಪಿಯನ್ನು ತುಡುಪ್ ಲೆಪ್ಚಾ ಎಂದು ಗುರುತಿಸಲಾಗಿದ್ದು, ಈತ ಒಂದು ಗಂಟೆ ಕಾಲ ಈ ಪ್ರದೇಶದಲ್ಲಿ ಅಡ್ಡಾಡುತ್ತಿದ್ದು ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದು ಬಳಿಕ ತನ್ನ ಮೇಲೆ ಬಂದೂಕನ್ನು ಗುರಿ ಇರಿಸಿಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ
ಕೋಲ್ಕತ್ತಾ ಪೊಲೀಸ್ ಸಶಸ್ತ್ರ ಪೊಲೀಸರ 5 ನೇ ಬೆಟಾಲಿಯನ್ನಿಂದ ಲೆಪ್ಚಾ ಅವರನ್ನು ಬಾಂಗ್ಲಾದೇಶ ಹೈಕಮಿಷನ್ಗೆ ನಿಯೋಜಿಸಲಾಗಿದೆ. ರಜೆಯಲ್ಲಿದ್ದ ಅವರು ಇಂದು ಬೆಳಗ್ಗೆ ಕರ್ತವ್ಯಕ್ಕೆ ಮರಳಿದರು. ಈತ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ನಾವು ಪ್ರದೇಶದಲ್ಲಿನ ಸಿಸಿಟಿವಿಯಿಂದ ದೃಶ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ನಮ್ಮ ಕಾನ್ಸ್ಟೆಬಲ್ ಮೃತಪಟ್ಟಿದ್ದಾರೆ ಹಾಗೂ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.