ಬೆಂಗಳೂರು, ಜೂ 10 (DaijiworldNews/HR): ಇವತ್ತಿನ ರಾಜಕಾರಣ ನೋಡಿ ಬೇಸರವಾಗಿದ್ದು, ರಾಜ್ಯದ ಜನರು ಕೂಡ ಬೇಸತ್ತಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಚುನಾವಣಾ ಮತದಾನದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ರಾಜಕಾರಣ ನೋಡಿ ಬೇಸರವಾಗಿದ್ದು, ಮುಂದೆ ನಿಲ್ಲಬೇಕಾ ಬೇಡವೋ ಎಂಬ ಗೊಂದಲವಿದೆ. ಜನರು ಏನು ಹೇಳುತ್ತಾರೆ ಅದರಂತೆ ನಡೆದುಕೊಳ್ಳುತ್ತೇನೆ ಎಂದರು.
ಇನ್ನು ಯಾವ ಸಂಧಾನ ಸಭೆ ನಡೆದಿಲ್ಲ, ನಾಯಕರ ನಡುವೆ ಭಿನ್ನಾಬಿಪ್ರಾಯ ಇರಬಹುದು. ನನ್ನನ್ನು ಜೆಡಿಎಸ್ ಮತದಾರರೇ ಗೆಲ್ಲಿಸಿರುವುದು. ನಾನು ಜೆಡಿಎಸ್ ಗೆ ಮತಹಾಕದೇ ಹೋದರೆ ತಪ್ಪು. ಹಾಗಾಗಿ ನಾನು ಜೆಡಿಎಸ್ ಗೆ ಮತಹಾಕಿದ್ದೇನೆ ಎಂದು ಹೇಳಿದ್ದಾರೆ.