ಗಾಂಧಿನಗರ, ಜೂ 06 (DaijiworldNews/HR): ಗುಜರಾತ್ ಬದಲಾವಣೆ ಬಯಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಚುನಾವಣೆಗೂ ಮುನ್ನ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಸಂಜೆ ಗುಜರಾತ್ನ ಮೆಹ್ಸಾನಾದಲ್ಲಿ 'ತ್ರಿವರ್ಣ ಯಾತ್ರೆ' ನಡೆಸಿದರು. ಮೆಹ್ಸಾನಾ ಬಿಜೆಪಿ ಭದ್ರಕೋಟೆಯಾಗಿದೆ ಇತ್ತೀಚಿನ ದಿನಗಳಲ್ಲಿ ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ.
ನಮ್ಮ ಪಕ್ಷದ ಸದಸ್ಯರು ರಾಜ್ಯದ ವಿವಿಧ ಕ್ಷೇತ್ರಗಳಿಗೆ ಹೋಗಿದ್ದಾರೆ. ಅವರು ಸಾವಿರಾರು ಜನರೊಂದಿಗೆ ಸಂವಾದ ನಡೆಸಿದ್ದಾರೆ ಎಂದು ಹೇಳಿದರು.
ಈ ಹಿಂದೆ "ತ್ರಿವರ್ಣ ಧ್ವಜ ನಮ್ಮ ಹೆಮ್ಮೆ" ಎಂದು ಒತ್ತಿಹೇಳಿರುವ ಕೇಜ್ರಿವಾಲ್ ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಜನರನ್ನು ಒತ್ತಾಯಿಸಿದ್ದರು. "ತ್ರಿವರ್ಣ ಧ್ವಜ ನಮ್ಮ ಹೆಮ್ಮೆ. ತ್ರಿವರ್ಣ ಧ್ವಜ ನಮ್ಮ ಧ್ವಜ. ತ್ರಿವರ್ಣ ಧ್ವಜ ನಮ್ಮ ಜೀವನ. ಇಂದು ಸಂಜೆ ಗುಜರಾತ್ನ ಮೆಹ್ಸಾನಾದಲ್ಲಿ ತ್ರಿವರ್ಣ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ಗುಜರಾತಿನ ಎಲ್ಲಾ ಜನರು ಇದರಲ್ಲಿ ಭಾಗವಹಿಸಬೇಕು. ಇದು ನನ್ನ ವಿನಂತಿ" ಎಂದು ಅವರು ಟ್ವೀಟ್ ಮಾಡಿದ್ದರು.