ಉತ್ತರ ಪ್ರದೇಶ, ಜೂ 06 (DaijiworldNews/HR): 2006ರಲ್ಲಿ ನಡೆದ ವಾರಣಾಸಿ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕ ವಲಿಯುಲ್ಲಾ ಖಾನ್ ಅವರಿಗೆ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿದೆ.
2006ರ ಮಾರ್ಚ್ 7ರಂದು ಸಂಕಟ್ ಮೋಚನ್ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ 20 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ವಲಿಯುಲ್ಲಾ ಖಾನ್ ಅವರಿಗೆ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ