ಚಿಕ್ಕಮಗಳೂರು, ಜೂ 06 (DaijiworldNews/HR): ಆರ್ಎಸ್ಎಸ್ ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆಗೆ ಕಿಡಿಕಾರಿರುವ ಸಿ.ಟಿ.ರವಿ, ಕಾಂಗ್ರೆಸ್ ನವರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ, ಅವರು ಜೀವನಪೂರ್ತಿ ಚಡ್ಡಿ ಸುಡುವ ಕೆಲಸವನ್ನೇ ಮಾಡುತ್ತಾ ಕುಳಿತಿರಲಿ. ಕಾಂಗ್ರೆಸ್ ನಾಯಕರಿಗೆ ಬೆಂಕಿ ಹಚ್ಚಲು ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ, ಎಲ್ಲರೂ ಹಳೆಯ ಚಡ್ಡಿಗಳನ್ನು ಕಳುಹಿಸಲು ಕರೆ ಕೊಡುತ್ತೇನೆ ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಕೈ ಕಮಲ ನಡುವೆ ಚಡ್ಡಿ ಪಾಲಿಟಿಕ್ಸ್ ನಡೆಯುತ್ತಿದ್ದ ಬೆನ್ನಲ್ಲೆ ಚಡ್ಡಿಗೆ ಬೆಂಕಿ ಹಾಕುವಂತೆ ಸಿದ್ದರಾಮಯ್ಯ ಹೇಳಿದ್ದಾರೆ ಅದೇ ಬೆಂಕಿಯಲ್ಲಿ ಸಿದ್ದರಾಮಯ್ಯ ಸುಟ್ಟು ಹೋಗ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.