ಬೆಂಗಳೂರು:, ಜೂ 06 (DaijiworldNews/HR): ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರ ಸಂಬಂಧಿ ಎಂಬುದಾಗಿ ಹೆಸರು ಹೇಳಿ, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿ ದರ್ಶನ್ ಗೌಡ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಈಗಾಗಲೇ ಹಲವರನ್ನು ಸಿಐಡಿ ತನಿಖೆಯ ಬಳಿಕ ಬಂಧಿಸಿದ್ದು, ವಿಚಾರಣೆಯ ವೇಳೆ ಸಚಿವ ಅಶ್ವತ್ಥನಾರಾಯಣ ಹೆಸರು ಹೇಳಿ ಆ ಬಳಿಕ ನಾಪತ್ತೆಯಾಗಿದ್ದಂತ ಅಭ್ಯರ್ಥಿ ದರ್ಶನ್ ಗೌಡ ಅರೆಸ್ಟ್ ಮಾಡಲಾಗಿದೆ.
ಇನ್ನು ಕೆಲ ದಿನಗಳ ಹಿಂದೆ ವಿಚಾರಣೆ ವೇಳೆಯಲ್ಲಿ ದರ್ಶನ್ ಗೌಡ, ಸಚಿವರ ಹೆಸರು ಹೇಳಿದ್ದರು. ಇದೇ ಕಾರಣಕ್ಕೆ ಅವರನ್ನು ಪ್ರಕರಣದಲ್ಲಿ ಬಿಟ್ಟು ಕಳುಹಿಸಲಾಗಿದೆ ಎಂಬುದಾಗಿ ಕಾಂಗ್ರೆಸ್, ಜೆಡಿಎಸ್ ನಾಯಕರು ಆರೋಪಿಸಿದ್ದರು.
ರಾಮನಗರ ಜಿಲ್ಲೆಯ ಮಾಗಡಿ ಮೂಲಕ ದರ್ಶನ್ ಗೌಡ ಬಂಧನಕ್ಕೆ ಸಿಐಡಿ ಹುಡುಕಾಟ ನಡೆಸಿದ್ದು, ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದೆ.