ವಿಜಯಪುರ, ಜೂ. 05 (DaijiworldNews/DB): ಆರೆಸ್ಸೆಸ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಸೋನಿಯಾಗಾಂಧಿ ಕೃಪೆಗೆ ಪಾತ್ರರಾಗಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ, ಬರಗಾಲ, ಯುದ್ದ ಯಾವುದೇ ಸಂಕಷ್ಟಗಳಲ್ಲಿಯೂ ಸಂಘ ಮಾಡುವ ಕೆಲಸ ಸಾಮಾನ್ಯದಲ್ಲ. ದೇಶಭಕ್ತ ಸಂಘಟನೆಯೊಂದರ ಬಗ್ಗೆ ಸಿದ್ದರಾಮಯ್ಯ ಮಾತನಾಡುವ ರೀತಿ ನೋಡಿದರೆ ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎನ್ನದೆ ವಿಧಿಯಿಲ್ಲ. ಮಾಜಿ ಮುಖ್ಯಮಂತ್ರಿಯೊಬ್ಬರು ಚಡ್ಡಿ ಸುಟ್ಟು ಹಾಕುವ ಪದ ಬಳಕೆ ಮಾಡುತ್ತಿರುವುದನ್ನು ನೋಡಿದರೆ ಅಪ್ರಬುದ್ದರಾಗಿ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದರು.
ಅವರು ಎಷ್ಟು ಅವಮಾನ ಮಾಡುತ್ತಾರೆಯೋ ಅಷ್ಟೇ ದೊಡ್ಡ ಮಟ್ಟದಲ್ಲಿ ಆರೆಸ್ಸೆಸ್ ಬೆಳೆಯುತ್ತದೆ. ಅವರು ಆರೆಸ್ಸೆಸ್ ಚಡ್ಡಿ ಸುಟ್ಟರೆ ಜನ ಅವರ ರಾಜಕೀಯ ಜೀವನವನ್ನೇ ಸುಟ್ಟು ಹಾಕುತ್ತಾರೆ ಎಂದು ತಿರುಗೇಟು ನೀಡಿದರು.