ಜಮ್ಮು, ಜೂ 05 (DaijiworldNews/HR): ಸತ್ವಾರಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು,ಠಾಣೆಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.
ಸತ್ವಾರಿ ಪೊಲೀಸ್ ಠಾಣೆಯ ಹೊರಗಿನ ತೆರೆದ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ವಶಪಡಿಸಿಕೊಂಡ ವಾಹನಗಳು ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗೆ ಆಹುತಿಯಾಗಿದದು, ಯಾವುದೇ ಪ್ರಾಣಾಪಾಯ ಸಂಭಂವಿಸಿಲ್ಲ.
ಈ ಕುರಿತು ಜಮ್ಮು ಪೊಲೀಸರು ಮಾಹಿತಿ ನೀಡಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಪೊಲೀಸ್ ಠಾಣೆ ಕಟ್ಟಡಕ್ಕೆ ಯಾವುದೇ ಹಾನಿ ಸಂಭವಿಸಿಲ್ಲಎಂದು ತಿಳಿಸಿದ್ದಾರೆ.