ಸಾಂಗ್ಲಿ, ಜೂ. 05 (DaijiworldNews/DB): ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್ ಟ್ರಕ್ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ಐವರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಅರಿಂಜಯ್ ಶಿರೋಟೆ (35), ಅವರ ಸಂಬಂಧಿಕರಾದ ಸ್ಮಿತಾ ಶಿರೋಟೆ (38) ಪೂರ್ವ ಶಿರೋಟೆ (14), ಸುನೇಶಾ ಶಿರೋಟೆ (10) ಮತ್ತು ವೀರು ಶಿರೋಟೆ (4) ಎಂದು ಗುರುತಿಸಲಾಗಿದೆ. ಅರಿಂಜಯ್ ಶಿರೋಟೆ ತನ್ನ ಸಂಬಂಧಿಕರನ್ನು ಜೈಸಿಂಗ್ಪುರಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಪುಣೆಯಿಂದ ಕೊಲ್ಲಾಪುರದ ಜಯಸಿಂಗ್ ಪುರಕ್ಕೆ ಸಂಚರಿಸುತ್ತಿದ್ದ ಕಾರು ಸಾಂಗ್ಲಿಯ ಕಾಸೆಗಾಂವ್ ಪ್ರದೇಶದ ಯೆವಲೆವಾಡಿ ಫಾಟಾ ಪ್ರದೇಶದ ಬಳಿ ಕಂಟೈನರ್ ಟ್ರಕ್ಗೆ ಢಿಕ್ಕಿ ಹೊಡಿದಿದೆ. ಶನಿವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು, ಕಾರು ತೀವ್ರ ಜಖಂಗೊಂಡಿದೆ. ಕಾರಿನಲ್ಲಿದ್ದ ಎಲ್ಲಾ ಐವರೂ ಮೃತಪಟ್ಟಿದ್ದಾರೆ. ಅತಿ ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ ಎಂದು ಕಾಸೆಗಾಂವ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.