ಬೆಂಗಳೂರು, ಜೂ 05 (DaijiworldNews/HR): ಪಂಚೆ ಬಿದ್ದಾಗ, ನಿಮ್ಮ ಮಾನ ಕಾಪಾಡಿದ್ದೇ ಚಡ್ಡಿ. ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ! ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದೆ.
ಸಿದ್ಧರಾಮಯ್ಯ ಅವರು ಆರ್ಎಸ್ಎಸ್ ಚಡ್ಡಿ ಸುಡೋ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ ಬಳಿಕ, ಬಿಜೆಪಿಯ ನಾಯಕರ ವಾಕ್ ಸಮರ ತಾರಕಕ್ಕೇರಿದ್ದು, ಈ ಬಗ್ಗೆ ಯೂಟ್ಯೂಬ್ ಲಿಂಕ್ ಸಹಿತ ಶೇರ್ ಮಾಡಿರುವಂತ ಬಿಜೆಪಿ ಕರ್ನಾಟಕ, ವಿಧಾನಸಭೆಯಲ್ಲಿ ನಿಮ್ಮ ಪಂಚೆ ಉದುರಿ ಹೋದಾಗ, ನಿಮ್ಮ ಮಾನ ಕಾಪಾಡಿದ್ದೇ ಚಡ್ಡಿಯಾಗಿದೆ. ಈ ಚಡ್ಡಿಯನ್ನು ನೀವು ಸುಡುತ್ತೇವೆ ಎಂದು ಹೇಳಿದ್ದೀರಿ. ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ ಎಂದು ವ್ಯಂಗ್ಯವಾಡಿದೆ.
ಇನ್ನು ಸಿದ್ದರಾಮಯ್ಯನವರೇ, ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಕ್ಕೆ ಮುನ್ನ ನಿಮ್ಮ ಕಾರ್ಯಕರ್ತರಿಗೆ ಒಂದು ಎಚ್ಚರಿಕೆ ನೀಡಿ. ನಲಪಾಡ್ ಅವನಂಥಹ ಬೀದಿ ರೌಡಿಗಳು ಬೇರೆಯವರ ಚಡ್ಡಿ ಕದ್ದು ಸುಡುವ ಅಪಾಯವಿದೆ ಎಂದಿದೆ.
ಸಿದ್ದರಾಮಯ್ಯನವರೇ, ಚಡ್ಡಿ ಮಾನದ ಸಂಕೇತ. ಶ್ರಮಿಕ ವರ್ಗದ ಸಂಕೇತ. ನೀವು ಚಡ್ಡಿ ಸುಡುವ ಅಭಿಯಾನ ನಡೆಸಿ ನಿಮ್ಮ ಮಾನವನ್ನು ನೀವೇ ಸುಟ್ಟುಕೊಳ್ಳಲು ಹೊರಟಿದ್ದೀರಿ ಎಂದು ಹೇಳಿದೆ.