ಬೆಂಗಳೂರು, ಜೂ 05 (DaijiworldNews/HR): ಆರ್ಎಸ್ಎಸ್ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆರ್ಎಸ್ಎಸ್ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ? ಸಂಘದ ಕಚೇರಿಯ ಮೇಲೆ 57 ವರ್ಷ ನಮ್ಮ ರಾಷ್ಟ್ರಧ್ವಜ ಏಕೆ ಹಾರಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪಠ್ಯ ಪರಿಷ್ಕರಣೆ ಮಾಡಿದ್ದು, 27 ಉಪ ಸಮಿತಿ ರಚಿಸಿ, ತಜ್ಞರ ಅಭಿಪ್ರಾಯ ಪಡೆದು, ಸದನದಲ್ಲಿ ಚರ್ಚಿಸಿ ಪರಿಷ್ಕೃತ ಪಠ್ಯ ಜಾರಿಗೆ ತರಲಾಗಿತ್ತು. ಉಪ ಸಮಿತಿಗಳ ಲೋಪ ಸರಿಪಡಿಸಲು ಉನ್ನತ ಸಮಿತಿ ರಚಿಸಿ, ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಎಂದಿದ್ದಾರೆ.