ದಾವಣಗೆರೆ, ಜೂ 05 (DaijiworldNews/HR): ಆರ್ಎಸ್ಎಸ್ ಬಗ್ಗೆ ಮಾತನಾಡುವ ಕಾಂಗ್ರೆಸ್ಗೆ ಬುದ್ಧಿ ಭ್ರಮಣೆಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ವಾಗ್ದಾಳಿ ನದೆಸಿದ್ದಾರೆ.
ಆರ್ಎಸ್ಎಸ್ ಚಡ್ಡಿ ಸುಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ಎಸ್ಎಸ್ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ. ಆರ್ಎಸ್ಎಸ್ ಚಡ್ಡಿ ಸುಡುವ ಅಭಿಯಾನದ ಬಗ್ಗೆ ಹೇಳಿರುವ ಸಿದ್ದರಾಮಯ್ಯಗೆ ಬುದ್ಧಿ ಇಲ್ಲ ಎಂದಿದ್ದಾರೆ.
ಇನ್ನು ಆರ್ಎಸ್ಎಸ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಗೆ ಬುದ್ಧಿ ಭ್ರಮಣೆ ಆಗಿದ್ದು, ಆರ್ಎಸ್ಎಸ್ ದೇಶ ಸೇವೆಗೆ ಹೆಸರಾಗಿರುವ ಸಂಸ್ಥೆ, ಆರ್ಎಸ್ಎಸ್ಬಗ್ಗೆ ಈ ರೀತಿಯ ಹೇಳಿಕೆ ಸಿದ್ದರಾಮಯ್ಯಗೆ ಶೋಭೆ ತರಲ್ಲ ಎಂದು ಹೇಳಿದ್ದಾರೆ.