ಬಾಗಲಕೋಟೆ, ಜೂ. 05 (DaijiworldNews/DB): ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಬಿಎಸ್ಎಫ್ ಯೋಧರೋರ್ವರು ಅಸ್ಸಾಂನಲ್ಲಿ ಸಿಡಿಲು ಬಡಿದು ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧನನ್ನು ಅಶೋಕ್ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಕರ್ತವ್ಯನಿರತರಾಗಿದ್ದ ವೇಳೆ ಅವರಿಗೆ ಸಿಡಿಲು ಬಡಿದಿದೆ. ಬಿಎಸ್ ಎಫ್ 31 ಬೆಟಾಲಿಯನ್ ಅಸ್ಸಾಂ-ಬಾಂಗ್ಲಾ ಗಡಿಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಯೋಧ ಅಶೋಕ್ ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಶೋಕ್ ಪಾರ್ಥೀವ ಶರೀರ ನಾಳೆ ಸ್ವಗ್ರಾಮ ಶಿರೂರಿಗೆ ಆಗಮಿಸುವ ಸಾಧ್ಯತೆ ಇದೆ.