ಚಿತ್ರದುರ್ಗ, ಜೂ 04 (DaijiworldNews/HR): ಪಠ್ಯ ಪರಿಷ್ಕರಣೆಯಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವಾಂಶದ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು.
ಈ ಕುರಿತು ಮಾತನಾಡಿದ ಅವರು, ಪಠ್ಯಪುಸ್ತಕ ಸಮಿತಿಯ ಕೆಲಸ ಪೂರ್ಣಗೊಂಡಿದ್ದರಿಂದ ಸಮಿತಿಯನ್ನು ವಿಸರ್ಜನೆ ಗೊಳಿಸಲಾಗಿದ್ದು, ಪರಿಷ್ಕೃತ ಪಠ್ಯದ ಬಗ್ಗೆ ಹಲವಾರು ಸ್ವಾಮೀಜಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದು, ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನಮ್ಮದು ಬಸವಪಥ ಸರ್ಕಾರ. ಬಸವಣ್ಣನವರ ಉತ್ತಮ ವಚನಗಳಿದ್ದು, ಅವುಗಳನ್ನು ಪರಿಶೀಲಿಸಿದ್ದೇನೆ ಎಂದರು.
ಇನ್ನು 2015ರಲ್ಲಿ ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿದ ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಈಗಿನ ಸಮಿತಿಗೆ ಕೇವಲ ಒಂದು ವಾಕ್ಯದ ವ್ಯತ್ಯಾಸವಿದ್ದು, ಉಳಿದಂತೆ ಲಿಂಗದೀಕ್ಷೆ ಸೇರಿದಂತೆ ಎಲ್ಲ ವಿಷಯಗಳು ಬರಗೂರು ರಾಮಚಂದ್ರಪ್ಪ ಅವರ ಪಠ್ಯದಲ್ಲಿಯೂ ಇದೆ ಎಂದು ಹೇಳಿದ್ದಾರೆ.