ರಾಮನಗರ, ಜೂ. 04 (DaijiworldNews/DB): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಕುರಿತು ನಿರ್ಧಾರ ಕೈಗೊಳ್ಳಬಹುದು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಸುಮಲತಾ ಬೆಂಬಲಿಗರಲ್ಲಿ ಹಲವರು ಈಗಾಗಲೇ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದೆ ಕೂಡಾ ಸೇರ್ಪಡೆಯಾಗಬಹುದು. ಆದರೆ ಈಗಲೇ ಅವರಿಗೆ ಪಕ್ಷದ ಜೊತೆ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮುಂದೆ ಅವರು ತೀರ್ಮಾನ ತೆಗೆದುಕೊಳ್ಳಬಹುದು ಎಂದರು.
ಮಂಡ್ಯದ ಅಭಿವೃದ್ದಿಯಲ್ಲಿ ಸುಮಲತಾ ಹಲವು ಮಹತ್ತರ ಕೆಲಸಗಳನ್ನು ಮಾಡಿದ್ದಾರೆ. ಈ ಕುರಿತಂತೆ ಸಿಎಂ ಬೊಮ್ಮಾಯಿ ಅವರಲ್ಲಿಯೂ ಚರ್ಚಿಸಲಾಗಿದೆ. ಸಿಎಂ ಕೂಡಾ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎಂದವರು ತಿಳಿಸಿದರು.