ಧಾರವಾಡ, ಜೂ 04 (DaijiworldNews/HR): ಎಚ್.ಡಿ.ಕುಮಾರಸ್ವಾಮಿ ಅವರ ಕಾರಿಗೆ ಪಿಎಸ್ಐ ಹುದ್ದೆ ನೇಮಕಾತಿಯಿಂದ ವಂಚಿತರಾದ ಅಭ್ಯರ್ಥಿಗಳು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ನಡೆದಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವಾರದಿಂದ ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದು, ಇವರ ಸಮಸ್ಯೆ ಆಲಿಸಲು ಎಚ್ಡಿಕೆ ಆಗಮಿಸಿದ್ದರು.
ಇನ್ನು ಕುಮಾರಸ್ವಾಮಿ ಆಗಮಿಸಿದ ವೇಳೆ ಜಮಾಯಿಸಿದ ಪಿಎಸ್ಐ ಹುದ್ದೆ ವಂಚಿತ ಅಭ್ಯರ್ಥಿಗಳು, ನಮಗೆ ನ್ಯಾಯ ಕೊಡಿಸಿ ಎಂದು ಎಚ್ಡಿಕೆ ಜೊತೆ ಮಾತಿನ ಚಕಮಕಿ ನಡೆಸಿದ್ದು, ವಾಪಸ್ ಹೋಗುವಾಗ ಮುತ್ತಿಗೆ ಹಾಕಲು ಯತ್ನಿಸಿದ ಅಭ್ಯರ್ಥಿಗಳು ಮೋದಿ...ಮೋದಿ ಎಂದು ಘೋಷಣೆ ಕೂಗುತ್ತಾ ಎಚ್ಡಿಕೆ ಅವರ ಕಾರನ್ನು ಬೆನ್ನತ್ತಿ ಹೋಗಿದ್ದಾರೆ ಎಂದು ವರದಿಯಾಗಿದೆ.