ಬೆಂಗಳೂರು, ಜೂ 04 (DaijiworldNews/HR): ಪಿಎಸ್ಐ ಪರೀಕ್ಷೆ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ 8 ಶಾಸಕರು ಪತ್ರ ಬರೆದಿದ್ದಾರೆ.
ಶಾಸಕರಾದ ಕೆ.ಎಸ್. ಲಿಂಗೇಶ್, ಪಿ.ರಾಜೇಶ್, ಸುನಿಲ್ ನಾಯ್ಕ್, ರಘುಪತಿ ಭಟ್, ರಾಜುಕುಮಾರ್ ತೇಲ್ಕೂರ್, ಹರೀಶ್ ಪೂಂಜಾ. ಲಾಲಾಜಿ ಮೆಂಡನ್, ಜೆ.ಎನ್. ಗಣೇಶ್. ರಾಘವೇಂದ್ರ ಹಿಟ್ನಾಳ್ ಅವರು ಗೃಹ ಸಚಿವ ಅರಗ ಜ್ಞಾನೇಂದ್ರಗೆ ಪತ್ರ ಬರೆದಿದ್ದಾರೆ.
ಇನ್ನು ಕೆಲವರು ಮಾಡಿದ ತಪ್ಪಿನಿಂದಾಗಿ ಸಂಪೂರ್ಣ ಪಿಎಸ್ಐ ಪರೀಕ್ಷೆಯನ್ನೇ ರದ್ದು ಮಾಡಿರುವುದು ಸರಿಯಲ್ಲ. ಸರ್ಕಾರದ ಈ ನಿರ್ಧಾರದಿಂದ ಬಡ ಮಕ್ಕಳಿಗೆ ಅನ್ಯಾಯವಾಗಿದೆ. ಪರೀಕ್ಷೆಯಲ್ಲಿ ಅಕ್ರಮ ಎಸಗಿದವರಿಗೆ ಶಿಕ್ಷೆ ಆಗಬೇಕು. ಜೊತೆಗೆ ಬಡಮಕ್ಕಳಿಗೆ ಅನ್ಯಾಯವಾಗದ ರೀತಿ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.