ಪಂಜಾಬ್, ಜೂ 04 (DaijiworldNews/MS): ಚಂಡೀಗಢದ ಹೆಚ್ಕ್ಯುನಲ್ಲಿ ಕಳೆದ ವಾರ ಹತ್ಯೆಗೀಡಾದ ಪಂಜಾಬಿ ರಾಪರ್-ರಾಜಕಾರಣಿ ಸಿಧು ಮೂಸೆವಾಲಾ ಅವರ ಕುಟುಂಬದ ಸದಸ್ಯರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿದ್ದಾರೆ.
ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಉದ್ಘಾಟಿಸಲು ಸಚಿವರು ಚಂಡೀಗಡಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೂಸೆವಾಲಾ ಕುಟುಂಬ ಸದಸ್ಯರಿಗೆ ಶಾ ಅವರು ಸಾಂತ್ವನ ಹೇಳಲಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗುಂಡೇಟಿಗೆ ಒಳಗಾಗುವ ಒಂದು ದಿನ ಮೊದಲು ಸಿಧು ಮೂಸ್ ವಾಲಾ ಅವರಿಗೆ ರಾಜ್ಯ ಒದಗಿಸಿದ ಭದ್ರತೆಯನ್ನು ಕಡಿಮೆಗೊಳಿಸಿ ಆದೇಶ ಹೊರಡಿಸಿತ್ತು. ಭಾರತದ ಹೊರತಾಗಿ, ಸಿಧು ಮೂಸ್ ವಾಲಾ ಅವರು ವಿದೇಶದಲ್ಲಿ, ವಿಶೇಷವಾಗಿ ಕೆನಡಾ ಮತ್ತು ಬ್ರಿಟನ್ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರನ್ನು ಪಂಜಾಬಿಗೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಪಂಜಾಬ್ ಪೊಲೀಸರು ಬುಧವಾರ ತಿಳಿಸಿದ್ದಾರೆ.