ಮಹೋಬಾ, ಜೂ 04 (DaijiworldNews/MS): ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕೆ ಮಹಿಳೆಯೊಬ್ಬಳನ್ನು ಆಕೆಯ ಪತಿ ಮತ್ತು ಆತನ ಕುಟುಂಬಸ್ಥರು ಅಮಾನುಷವಾಗಿ ಥಳಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.
ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಗು ಬೇಕೆಂದು ಪತಿ ಮತ್ತು ಅತ್ತೆ ಮನೆಯವರು ಪದೇ ಪದೇ ಕಿರುಕುಳ ನೀಡಿ ಮತ್ತು ಹಲ್ಲೆ ನಡೆಸುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಗಂಡ ಮತ್ತು ಅತ್ತೆ-ಮಾ ನನಗೆ ಗಂಡು ಮಗುವಾಗಲಿಲ್ಲ ಎಂದು ಚಿತ್ರಹಿಂಸೆ ನೀಡುತ್ತಿದ್ದರು. ಎರಡನೇ ಮಗಳು ಹುಟ್ಟಿದ ನಂತರ ಕಿರುಕುಳ ಹೆಚ್ಚಾಯಿತು' ಅನ್ನ ಆಹಾರ ನೀಡದೆ ಮಹಿಳೆ ಹಸಿವಿನಿಂದ ಬಳಲುವಂತೆ ಮಾದುತ್ತಾರೆ ಹೀಗಾಗಿ ಕೂಲಿ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಮಹಿಳೆ ದೂರಿದ್ದಾರೆ.
ಘಟನೆಯ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಆಕೆಯನ್ನು ನಿಂದಿಸುವುದು, ಒದೆಯುವುದು ಮತ್ತು ಹೊಡೆಯುವುದನ್ನು ದಾಖಲಾಗಿದ್ದು, ತನಗೆ ನೀಡುತ್ತಿರುವ ಹಿಂಸೆ ನಿಲ್ಲಿಸುವಂತೆ ಅಳುತ್ತಾ ಬೇಡಿಕೊಳ್ಳವ ದೃಶ್ಯ ದಾಖಲಾಗಿದೆ.
ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಎಫ್ಐಆರ್ ದಾಖಲಿಸಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಮಹೋಬಾದ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ಹೇಳಿದ್ದಾರೆ.