ಶ್ರೀನಗರ, ಜೂ. 04 (DaijiworldNews/DB): ಕಾಶ್ಮೀರದಲ್ಲಿ ಹಿಂದೆಂದೂ ಇರದ ಸಮಸ್ಯೆ ಕಳೆದ ಎರಡೂವರೆ ವರ್ಷದಿಂದ ಆರಂಭವಾಗಿದೆ ಎಂದು ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ ಅಂಕಜ್ ಟಿಕ್ಕೋ ಆರೋಪಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ನೆಲೆಸಿದ್ದೇನೆ. ಯಾವುದೇ ತೊಂದರೆ ಇಲ್ಲದ ಬದುಕು ನಮ್ಮದಾಗಿತ್ತು. ಸ್ಥಳೀಯರು ಎಲ್ಲಾ ಸಹಕಾರ, ಸಹಾಯ ನೀಡುತ್ತಿದ್ದರು. ಆದರೆ ಎರಡೂವರೆ ವರ್ಷಗಳಿಂದ ಸಮಸ್ಯೆಗಳು ಆರಂಭವಾಗಿವೆ ಎಂದು ಅವರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
1990ರಲ್ಲಿ ನಮ್ಮ ಪೋಷಕರಿಗೆ ಏನೇನು ಸಮಸ್ಯೆಗಳಾಗಿದ್ದವೋ, ಪ್ರಸ್ತುತ ಎರಡೂವರೆ ವರ್ಷಗಳಿಂದ ಆ ಸಮಸ್ಯೆಗಳನ್ನು ನಾವು ಅನುಭವಿಸಬೇಕಾಗಿ ಬಂದಿದೆ. ಆಗಿದ್ದ ಸ್ಥಿತಿಗಿಂತ ಕೆಟ್ಟ ಸ್ಥಿತಿ ಈಗ ಇದೆ. ಇದನ್ನು ನಿಭಾಯಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಹಿಂದೂಗಳು ಮತ್ತು ವಲಸೆ ಕಾರ್ಮಿಕರಿಗೆ ನೀಡುತ್ತಿರುವ ಭದ್ರತೆಯನ್ನು ಕೇಂದ್ರ ಸರ್ಕಾರವು ಕೂಡಲೇ ಹೆಚ್ಚಿಸಬೇಕು ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಒತ್ತಾಯಿಸಿದ್ದಾರೆ.