ನವದೆಹಲಿ, ಜೂ 03 (DaijiworldNews/HR): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹಣೆಪಟ್ಟಿಯನ್ನು ಮರಳಿ ಪಡೆದಿದ್ದು, ತಮ್ಮ ಪ್ರತಿಸ್ಪರ್ಧಿ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿದ್ದಾರೆ.
ಮುಕೇಶ್ ಅಂಬಾನಿ 104.7 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಹೊಂದಿದ್ದು, ಈಗ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ ಎಂದು ಫೋರ್ಬ್ಸ್ ಶ್ರೀಮಂತರ ಪಟ್ಟಿ ತಿಳಿಸಿದೆ.
ಇನ್ನು ರಿಲಯನ್ಸ್ ಚೇರ್ಮನ್ 2022 ರ ಮೊದಲ ಐದು ತಿಂಗಳಲ್ಲಿ ತಮ್ಮ ಸಂಪತ್ತಿಗೆ 10 ಬಿಲಿಯನ್ ಡಾಲರ್ ಸೇರಿಸಿದ್ದು, ಗೌತಮ್ ಅದಾನಿ ಈಗ ಒಂಬತ್ತನೇ ಸ್ಥಾನದಲ್ಲಿದ್ದಾರೆ.