ಬೆಂಗಳೂರು, ಜೂ 03 (DaijiworldNews/HR): ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಶಾಸಕರಿಗೆ ಕಡ್ಡಾಯವಾಗಿ ಚುನಾವಣೆಯಂದು ಹಾಜರಾಗಲು ವಿಪ್ ಜಾರಿಗೊಳಿಸಲಾಗಿದೆ.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಜೈರಾಂ ರಮೇಶ್ ಹಾಗೂ ಮನ್ಸೂರ್ ಆಲಿ ಖಾನ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.
ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ಮುಖ್ಯ ಸಚೇತಕರಾದಂತ ಡಾ.ಅಜಯ್ ಧರ್ಮಸಿಂಗ್, ಅವರು ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿದ್ದು, ಜೂನ್ 10ರಂದು ಶುಕ್ರವಾರ ವಿಧಾನಸೌಧದದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ರಾಜ್ಯಸಭೆ ಚುನಾವಣೆಯು ನಡೆಯಲಿದ್ದು, ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಅಧಿಕೃತ ಅಭ್ಯರ್ಥಿಗಳಇಗೆ ಮತ ಚಲಾಯಿಸಬೇಕಾಗಿರುವುದರಿಂದ ತಾವುಗಳು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದು ವಿಪ್ ನಲ್ಲಿ ತಿಳಿಸಿದ್ದಾರೆ.