ನವದೆಹಲಿ, ಜೂ 03 (DaijiworldNews/MS): 'ಮುಖರಹಿತ ಸೇವೆಗಳು' (ಫೇಸ್ ಲೆಸ್ ಸರ್ವಿಸ್ ) ಪರಿಕಲ್ಪನೆಯನ್ನು ಪರಿಚಯಿಸಿದ ದೇಶದ ಮೊದಲ ನಗರ ದೆಹಲಿಯಾಗಿದೆ. ಈಗ ಇತರ ರಾಜ್ಯಗಳು ಸಹ ಇದರಿಂದ ಪ್ರೇರಿತವಾಗಿ ಇದೇ ಮಾದರಿಯ ಯೋಜನೆಗಳನ್ನು ಪ್ರಾರಂಭಿಸುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ದೆಹಲಿಯ ಸರಾಯ್ ಕಾಲೇ ಖಾನ್ನಲ್ಲಿ ಸ್ವಯಂಚಾಲಿತ ಟ್ರ್ಯಾಕ್ ಅನ್ನು ಪರಿಶೀಲಿಸುವಾಗ, ಕೇಜ್ರಿವಾಲ್ ದೆಹಲಿ ಸರ್ಕಾರ ಪರಿಚಯಿಸಿದ ವಿವಿಧ ಸೌಲಭ್ಯಗಳ ಬಗ್ಗೆ ಮಾತನಾಡಿದರು.
ಸಾರಿಗೆ ಇಲಾಖೆಯು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಸಂಪರ್ಕರಹಿತ, ಸರತಿ-ಮುಕ್ತ ಮತ್ತು ತೊಂದರೆ-ಮುಕ್ತ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು ಯಾವುದೇ ಕಚೇರಿಗಳಿಗೆ ಭೇಟಿ ನೀಡದೆ ಅರ್ಜಿದಾರರು ತಮ್ಮ ಕೆಲಸ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
"ಕಳೆದ ವರ್ಷ ಫೆಬ್ರುವರಿಯಲ್ಲಿ, ನಾವು 'ಫೇಸ್ ಲೆಸ್ ಸರ್ವಿಸ್' ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದ್ದೇವೆ. ನಂತರ ನಾವು ಅದನ್ನು ಪೂರ್ಣ ಪ್ರಮಾಣದ ರೀತಿಯಲ್ಲಿ ಪರಿಚಯಿಸಿದ್ದೇವೆ. ಹಲವು ತಿಂಗಳ ನಂತರ, ಪ್ರತಿಕ್ರಿಯೆ ಹೇಗಿದೆ ಎಂದು ನೋಡಲು ನಾನು ಬಂದಿದ್ದೇನೆ," ಎಂದು ಹೇಳಿದರು.
'ಮುಖರಹಿತ ಸೇವೆಗಳು' ಅಡಿಯಲ್ಲಿ, ಜನರು ತಮ್ಮ ಕೆಲಸವನ್ನು ಆನ್ಲೈನ್ನಲ್ಲಿ ಮಾಡಬಹುದಾದ ಕಾರಣ ತಮ್ಮ ಕೆಲಸದಿಂದ ರಜೆ ಪಡೆದು ಕಚೇರಿಗಳಿಗೆ ಬರಬೇಕಾಗಿಲ್ಲ.ಇಂದು, ಇಲ್ಲಿ ಬಹುತೇಕ ಎಲ್ಲಾ ಕೌಂಟರ್ಗಳು ಖಾಲಿಯಾಗಿರುವುದನ್ನು ನಾನು ನೋಡಿದೆ. ಬೆರಳೆಣಿಕೆ ಜನರು ಇಲ್ಲಿದ್ದು ವಿಚಾರಣೆಗಾಗಿ ಮಾತ್ರ ಬಂದಿದ್ದಾರೆ. ಆದರೆ ಮೊದಲು ಇಲ್ಲಿ 1,500-2000 ಜನರು ಸರದಿಯಲ್ಲಿ ನಿಲ್ಲುತ್ತಿದ್ದರು ಹೀಗಾಗಿ ರಾಷ್ಟ್ರ ರಾಜಧಾನಿ ಬಹುಶಃ ಇಂತಹ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ನಗರ ಎಂದು ಅವರು ಪ್ರತಿಪಾದಿಸಿದರು.
'ಫೇಸ್ ಲೆಸ್ ಸರ್ವಿಸ್' ಕರ್ನಾಟಕದಂತಹ ಇತರ ರಾಜ್ಯಗಳು ಸಹ ಅದರ ಮಾದರಿಯನ್ನು ಅನುಸರಿಸುತ್ತಿವೆ.ಭ್ರಷ್ಟಾಚಾರ ತೊಲಗಿಸಿ ಪಾರದರ್ಶಕತೆ ತಂದಿರುವ ಪ್ರಾಮಾಣಿಕ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಹೇಳಿದರು.