ಬೆಂಗಳೂರು, ಜೂ. 03 (DaijiworldNews/DB): ಆರೋಗ್ಯಕರ ಜೀವನಶೈಲಿ ಪಾಲನೆಗೆ ಮಹಾತ್ಮ ಗಾಂಧಿಯವರೇ ಸ್ಪೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವ ಸೈಕಲ್ ದಿನದ ಪ್ರಯುಕ್ತ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸೈಕಲ್ ತುಳಿಯುತ್ತಿರುವ ಫೋಟೊವನ್ನು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಗಾಂಧೀಜಿಯವರು ಪರಿಸರಸ್ನೇಹಿ ಜೀವನಶೈಲಿಯನ್ನು ಜೀವಿಸಿದ್ದರು. ಇಂದು ವಿಶ್ವ ಸೈಕಲ್ ದಿನ. ಒಳ್ಳೆಯ ಆರೋಗ್ಯಕ್ಕೆ ಸೈಕಲ್ ಬಳಕೆ ಪೂರಕ. ಆರೋಗ್ಯಕರ ಜೀವನಶೈಲಿ ಪಾಲನೆಯಲ್ಲಿ ಮಹಾತ್ಮಾ ಗಾಂಧೀಜಿಯವರಿಗಿಂತ ಬೇರೆ ಸ್ಪೂರ್ತಿ ಬೇಕಿಲ್ಲ ಎಂದಿದ್ದಾರೆ.
ಆರೋಗ್ಯಕರ ಜೀವಶೈಲಿ, ದೈಹಿಕ ಫಿಟ್ನೆಸ್ಗಾಗಿ ಸೈಕಲ್ ಬಳಸಲು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜೂನ್ 3ರಂದು ವಿಶ್ವ ಸೈಕಲ್ ದಿನವನ್ನು ಆಚರಣೆ ಮಾಡಲಾಗುತ್ತದೆ.