ಬೆಂಗಳೂರು, ಜೂ 03 (DaijiworldNews/MS): ಕ್ಷುಲಕ ಕಾರಣಕ್ಕೆ ಮಗನೇ ಹೆತ್ತ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಬೇಗೂರಿನ ಮೈಲಸಂದ್ರದಲ್ಲಿ ನಡೆದಿದೆ.
ಮೊಬೈಲ್ ಕೊಡಿಸದ ಕಾರಣಕ್ಕೆ ಜಗಳ ತೆಗೆದು ಹೆತ್ತ ತಾಯಿಯನ್ನೇ ಮಗ ಹತ್ಯೆ ಮಾಡಿದ್ದಾನೆ.
ಹಣ ಇಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದರು. ಕಳೆದ ಒಂದು ವಾರದಿಂದ ಮೊಬೈಲ್ ಕೊಡಿಸುವಂತೆ ಆರೋಪಿ ಪೀಡಿಸುತ್ತಿದ್ದ. ನಿನ್ನೆ ಕೂಡ ಮೊಬೈಲ್ ಕೊಡಿಸುವಂತೆ ತಾಯಿಯೊಂದಿಗೆ ಜಗಳವಾಡಿದ್ದು, ಹಣ ಇಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದರು. ಕೋಪಗೊಂಡ ಮಗ ಕತ್ತುಹಿಸುಕಿ ತಾಯಿಯನ್ನು ಕೊಲೆ ಮಾಡಿದ್ದಾನೆ. ಬೇಗೂರು ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.