ನಾಗ್ಪುರ, ಜೂ 02 (DaijiworldNews/SM): ದೇಶದೆಲ್ಲೆಡೆ ಮಂದಿರ ಮಸೀದಿ ವಿಚಾರ ಚರ್ಚೆಯಲ್ಲಿರುವ ಸಂದರ್ಭದಲ್ಲೇ "ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಖಾಸಗಿ ಮಾಆಧ್ಯಮಕ್ಕೀ ಪ್ರತಿಕ್ರಿಯೆ ನೀಡಿದ್ದಾರೆ.
ಜ್ಞಾನವಾಪಿ ಮಸೀದಿ ವಿವಾದವನ್ನು ಉಲ್ಲೇಖಿಸಿ ಈ ವಿಚಾರವನ್ನು ಅವರು ತಿಳಿಸಿದ್ದಾರೆ. ದೇಶದಲ್ಲಿ ಇತರ ದೇವಾಲಯಗಳು ಮಸೀದಿಗಳಾಗಿದ್ದರೆ, ಅವುಗಳಲ್ಲಿ ಶಿವಲಿಂಗ ಉಡುಕುವ ಅಗತ್ಯವಿಲ್ಲಾ ಎಂದಿದ್ದ್ದಾರೆ. "ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು ಮತ್ತು ಅದು ಕಾರ್ಯನಿರ್ವಹಿಸದಿದ್ದರೆ ಮಾತ್ರ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು" ಎಂದು ಹೇಳಿದರು.
"ಜನರ ಭಾವನೆಗಳನ್ನು ಉತ್ತೇಜಿಸುವಂತಹ ಕೆಲವು ಪೂಜಾ ಸ್ಥಳಗಳು ಇನ್ನೂ ಇರಬಹುದು" ಎಂದು ಅವರು ಜ್ಞಾನವಾಪಿ ಮಸೀದಿಯ ಬಗ್ಗೆ ಸುಳಿವು ನೀಡಿದರು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕೆಂದು ಅವರು ತಿಳಿಸಿದ್ದಾರೆ.