ವಿಜಯವಾಡ, ಜೂ 02 (DaijiworldNews/MS): ಮೂರು ದಿನದ ನವಜಾತ ಹೆಣ್ಣು ಶಿಶುವನ್ನು ವಾಟ್ಸಾಪ್ ಗ್ರೂಪ್ ಮೂಲಕ 3 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ವಿಜಯವಾಡ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಈ ಪ್ರದೇಶದಲ್ಲಿ ಮಗುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಎರಡನೇ ಪ್ರಕರಣ ಇದಾಗಿದೆ, ಆದರೆ ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಶಿಶುವನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದು ಮೊದಲ ಪ್ರಕರಣವಾಗಿದೆ.
ವಾಟ್ಸಪ್ ಗ್ರೂಪ್ ಮೂಲಕ ಚವಲಿ ಅಮೃತ ರಾವ್ ಎಂಬ ಆರೋಪಿ ಎಂಬಾತ ಶಿಶುವನ್ನು ಮಾರಾಟಕ್ಕೆ ಇಟ್ಟಿದ್ದಾನೆ ಎಂದು ಚೈಲ್ಡ್ಲೈನ್ ಜಿಲ್ಲಾ ಸಂಯೋಜಕ ಅರವ ರಮೇಶ್ ಅವರಿಂದ ದೂರು ಸ್ವೀಕರಿಸಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಅಜಿತ್ ಸಿಂಗ್ ನಗರ ಪೊಲೀಸರು ತಿಳಿಸಿದ್ದಾರೆ.