ಮೈಸೂರು, ಜೂ 02 (DaijiworldNews/HR): ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಮೂರನೇ ಅಭ್ಯರ್ಥಿಯೂ ಗೆಲ್ಲುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಪಕ್ಷಗಳಲ್ಲಿ ಮೋದಿ ಇಷ್ಟಪಡುವವರೂ ಇದ್ದಾರೆ. ಎರಡು ಪಕ್ಷಗಳ ಬಹಿರಂಗ ಭಿನ್ನಾಭಿಪ್ರಾಯ ಬಿಜೆಪಿಗೆ ಪ್ಲಸ್ ಆಗುತ್ತದೆ. ಜೆಡಿಎಸ್ ನಲ್ಲಿ 33 ವೋಟ್ ಇದ್ದು, ಆ ಮತಗಳೂ ಅವರಿಗೇ ಬಿಳುವ ವಿಶ್ವಾಸ ಇಲ್ಲ. ನಮ್ಮ ಎರಡು ಅಭ್ಯರ್ಥಿಗಳಿಗೂ ತಲಾ 45 ವೋಟ್ ಆದರೂ ಇನ್ನೂ 32 ವೋಟ್ ಉಳಿಯುತ್ತವೆ ಎಂದರು.
ಇನ್ನು ಚುನಾವಣಾ ರಣತಂತ್ರದ ಮೂಲಕ ಹೇಗೆ ಗೆಲ್ಲುತ್ತೇವೆ ಅನ್ನುವುದು ಜೂನ್ 10 ರ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.
ಆರ್ ಎಸ್ ಎಸ್ ನೂರಾರು ವಿದ್ಯಾಸಂಸ್ಥೆಗಳನ್ನ ಕಟ್ಟಿದೆ. ಶುಲ್ಕವಿಲ್ಲದೆ ಕೆಲವು ಕಡೆ ಶಿಕ್ಷಣ ಕೊಡುತ್ತಿದೆ. ಸಿದ್ದರಾಮಯ್ಯ ಅವರಿಗೆ ದೃಷ್ಟಿದೋಷ ಇರುಬಹುದು . ನಿಮ್ಮ ಸುತ್ತಲೂ ಭಯೋತ್ಪಾದಕರು ಇದ್ದಾರೆ. ನಿಮ್ಮದೇ ಶಾಸಕರ ಮನೆಗೆ ಬೆಂಕಿ ಬಿತ್ತು. ಅವರಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದಾರೆ. ಹೀಗಾಗಿ ನಿಮಗೆ ದೃಷ್ಟಿ ದೋಷವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.