ಮುಂಬೈ, ಜೂ 02 (DaijiworldNews/MS): ಸಕಿನಾಕಾ ಅತ್ಯಾಚಾರ ಕೊಲೆ ಪ್ರಕರಣ ಸಂಬಂಧದ ಶಿಕ್ಷೆಯ ಪ್ರಮಾಣವನ್ನು ಇಂದು ಮುಂಬೈನ ವಿಶೇಷ ಕೋರ್ಟ್ ಪ್ರಕಟಿಸಿದ್ದು ವಿಶೇಷ ನ್ಯಾಯಾಲಯ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸಕಿನಾಕಾದಲ್ಲಿ 32 ವರ್ಷದ ಮಹಿಳೆಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ಮೋಹನ್ ಚೌಹಾಣ್ಗೆ ನ್ಯಾಯಾಧೀಶ ಎಚ್ಸಿ ಶೆಂಡೆ ಮರಣದಂಡನೆ ವಿಧಿಸಿದ್ದಾರೆ.
ಇಂದು ಸಕಿನಾಕಾ ಅತ್ಯಾಚಾರ ಪ್ರಕರಣ ಸಂಬಂಧದ ವಾದ-ಪ್ರತಿವಾದದ ಬಳಿಕ ತನ್ನ ತೀರ್ಪನ್ನು ಪ್ರಕಟಿಸಿದೆ.
ಮಹಿಳೆಯ ಖಾಸಗಿ ಅಂಗಕ್ಕೆ ಹರಿತವಾದ ಆಯುಧವನ್ನು ಅಳವಡಿಸಿ ಅತ್ಯಾಚಾರ ಎಸಗಿ ಕೊಲೆಗೈದ ಅಪರಾಧಿಗೆ ನ್ಯಾಯಾಲಯವು ಅಂತಿಮ ಶಿಕ್ಷೆಯನ್ನು ನೀಡಿದೆ.