ಶ್ರೀನಗರ, ಜೂ 02 (DaijiworldNews/HR): ಉಗ್ರರ ಅಟ್ಟಹಾಸ ಜಮ್ಮು-ಕಾಶ್ಮೀರದಲ್ಲಿ ಮುಂದುವರಿದಿದ್ದು, ರಾಜಸ್ಥಾನ್ ಮೂಲದ ಬ್ಯಾಂಕ್ ಮ್ಯಾನೇಜರ್ ಅನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಇಂದು ನಡೆದಿದೆ.
ಮೋಹನ್ ಪೋರಾದಲ್ಲಿನ ಎಲ್ಲಾಕ್ವೈ ದೆಹಾತಿ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಜಯ್ ಕುಮಾರ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಇನ್ನು ಗುರುವಾರ ಬೆಳಗ್ಗೆ ಯೋಧರ ವಾಹನ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ನಡೆದ ಶೋಪಿಯಾನ್ ಪ್ರದೇಶದಿಂದ 13 ಕಿಲೋ ಮೀಟರ್ ದೂರದಲ್ಲಿ ಬ್ಯಾಂಕ್ ಮ್ಯಾನೇಜರ್ ಹತ್ಯೆ ಘಟನೆ ನಡೆದಿದೆ.